You are here
Home > ಆರೋಗ್ಯ > ನಿಮ್ಮ ಗ್ಯಾಸ್ ಸಮಸ್ಯಗೆ ಮನೆಯಲ್ಲೇ ಇದೆ ಮದ್ದು..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

ನಿಮ್ಮ ಗ್ಯಾಸ್ ಸಮಸ್ಯಗೆ ಮನೆಯಲ್ಲೇ ಇದೆ ಮದ್ದು..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

ಈಗ ಎಲ್ಲರಿಗೂ ಕಾಡುವ ಮೂಲ ಸಮಸ್ಯ ಗ್ಯಾಸ್ ಟ್ರಬಲ್.ಎಲ್ಲಾ ವಯಸ್ಸಿನ ವಯೋಮಾನದವರಿಗೂ ಈಗ ಗ್ಯಾಸ್ ಶುರುವಾಗಿದೆ.ಹೊಟ್ಟೆ ಉರಿ, ನೋವು, ಗ್ಯಾಸ್ ಅಂತಾ ಮಾತ್ರೆ ನುಂಗುವವರ ಸಂಖ್ಯೆ ಜಾಸ್ತಿಯಾಗ್ತಿದೆ.

ಮನೆ ಮದ್ದಿನಿಂದಲೇ ನಿಮ್ಮ ಗ್ಯಾಸ್ ಸಮಸ್ಯಗೆ ಪರಿಹಾರ ಪಡೆಯಿರಿ..

ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ವೇಳೆ ಬೆಚ್ಚಗಿನ ನೀರು ಕುಡಿಯಬೇಕು. ಊಟವಾದ ತಕ್ಷಣ ನೀರು ಸೇವನೆ ಒಳ್ಳೆಯದಲ್ಲ. ಇದರಿಂದ ಗ್ಯಾಸ್ ಜಾಸ್ತಿಯಾಗುತ್ತದೆ.

ಹಾಲಿಗೆ ಸ್ವಲ್ಪ ಕಾಳು ಮೆಣಸಿನ ಪುಡಿ ಸೇರಿಸಿ ಕುಡಿಯುವುದರಿಂದಲೂ ಗ್ಯಾಸ್ ಕಡಿಮೆಯಾಗುತ್ತದೆ.

ಗ್ಯಾಸ್ ಸಮಸ್ಯೆಯುಳ್ಳವರು ತುಳಸಿ ಎಲೆ ಸೇವನೆ ಮಾಡುವುದು ಉತ್ತಮ. ನಾಲ್ಕೈದು ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿ.

ಗ್ಯಾಸಿನ ಸಮಸ್ಯೆ ಜಾಸ್ತಿ ಇರುವವರು ಬಿಸಿ ನೀರಿಗೆ ಇಂಗು ಸೇರಿಸಿ ಕುಡಿಯಿರಿ. ದಿನಕ್ಕೆ ಮೂರು ಬಾರಿ ಹೀಗೆ ಮಾಡುತ್ತ ಬಂದರೆ ಗ್ಯಾಸ್ ನಿಯಂತ್ರಣಕ್ಕೆ ಬರುತ್ತದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬು ರಸಕ್ಕೆ ಅಡುಗೆ ಸೋಡಾ ಸೇರಿಸಿ ಕುಡಿಯುತ್ತ ಬನ್ನಿ.

ದಾಲ್ಚಿನಿ ಕೂಡ ಗ್ಯಾಸ್ ಗೆ ಒಳ್ಳೆಯ ಮನೆ ಮದ್ದು. ನೀರಿಗೆ ದಾಲ್ಜಿನಿ ಪುಡಿ ಸೇರಿಸಿ ಕುದಿಸಿ ತಣ್ಣಗಾದ ಮೇಲೆ ದಿನಕ್ಕೆ ಎರಡು ಬಾರಿ ಕುಡಿಯಿರಿ.

ಬೆಳ್ಳುಳ್ಳಿ, ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಗ್ಯಾಸ್ ಕಡಿಮೆಯಾಗುತ್ತದೆ.

Top