You are here
Home > ಉಪಯುಕ್ತ ಮಾಹಿತಿ > ಹೀಗೆ ಮಾಡಿದ್ರೆ ನಿಮ್ಮ ತೂಕವನ್ನು ಒಂದು ವಾರದಲ್ಲಿ ಇಷ್ಟು ಕೆಜಿ ಮಾಡಿಕೊಳ್ಳಬಹುದು..?ಹೇಗೆಂದು ತಿಳಿಯಲು ಈ ಲೇಖನ ಓದಿ…

ಹೀಗೆ ಮಾಡಿದ್ರೆ ನಿಮ್ಮ ತೂಕವನ್ನು ಒಂದು ವಾರದಲ್ಲಿ ಇಷ್ಟು ಕೆಜಿ ಮಾಡಿಕೊಳ್ಳಬಹುದು..?ಹೇಗೆಂದು ತಿಳಿಯಲು ಈ ಲೇಖನ ಓದಿ…

ಈಗಿನ ಆಹಾರದ ಕ್ರಮ, ಮತ್ತು ಜೀವನ ಶೈಲಿಯಿಂದ ಆರೋಗ್ಯದಲ್ಲಿ ಏರು ಪೇರುಗಲಾಗುತ್ತಿವೆ.ಇದರಲ್ಲಿ ಈಗ ಎಲ್ಲರಿಗೂ ಕಾಡುತ್ತಿರುವ ದೊಡ್ಡ ಸಮಸ್ಯ ಎಂದರೆ ದೇಹದಲ್ಲಿ ತೂಕ ಜಾಸ್ತಿಯಾಗುತ್ತಿರುವುದು.ನೀವು ಮನೆಯಲ್ಲಿಯೇ ಕುಳಿತು ನಿಮ್ಮ ತೂಕ ಇಳಿಸಿ ಕೊಳ್ಳಬಹುದಂತೆ.

ಹೌದು, ನೈಸರ್ಗಿಕ ಔಷಧಿ ವಾಟರ್ ಥೆರಪಿ ಮೂಲಕ ತೂಕ ಇಳಿಸಿಕೊಳ್ಳಬಹುದು. ಬ್ರಿಟನ್ ನ ಫಿಟ್ನೆಸ್ ಕೋಚ್ ಶೌನ್ ವಾಕರ್ ವಾಟರ್ ಥೆರಪಿಯ ಕೆಲವೊಂದು ಪ್ರಯೋಗಗಳನ್ನು ಮಾಡಿದ್ದಾರೆ. ಇವರು ಹೇಳುವ ಪ್ರಕಾರ  ವಾಟರ್ ಥೆರಪಿ ಮೂಲಕ 10 ದಿನಗಳಲ್ಲಿ 4-5 ಕೆ.ಜಿ ತೂಕ ಇಳಿಸಿಕೊಳ್ಳಬಹುದು. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಬಿದ್ದಾಗ ದೇಹದ ಅಂಗಗಳು ಸರಿಯಾಗಿ ಕೆಲಸ ಮಾಡುತ್ತವೆ. ಇದರಿಂದ ಜೀರ್ಣಕ್ರಿಯೆ ಕೂಡ ಸರಿಯಾಗಾಗುತ್ತದೆ. ಚಯಾಪಚಯ ಸರಿಯಾದಲ್ಲಿ ತೂಕ ಕೂಡ ಕಡಿಮೆಯಾಗುತ್ತದೆ.

ಹಾಗಾದ್ರೆ ಯಾವ ಸಮಯದಲ್ಲಿ ನೀರು ಕುಡಿದ್ರೆ ಇದು ಕೆಲಸ ಮಾಡುತ್ತೆ..?

ಬೆಳಿಗ್ಗೆ ಎದ್ದ ನಂತರ ತಿಂಡಿ ತಿನ್ನುವ ಮೊದಲು ಹಾಗೂ ತಿಂಡಿ ತಿಂದ ನನತರ ಮರೆಯದೇ ಒಂದು ಗ್ಲಾಸ್ ನೀರು ಕುಡಿಯಿರಿ.

ಚಹಾ ಅಥವಾ ಕಾಫಿ ಕುಡಿಯುವ ಮೊದಲು ನೀರು ಕುಡಿಯೋದನ್ನ ಮರೆಯಬೇಡಿ.

ದಿನಕ್ಕೆ ಕಡಿಮೆ ಅಂದ್ರು 9 ರಿಂದ 1೦ ಬಾರಿ ಮರೆಯದೇ ನೀರು ಕುಡಿಯಿರಿ.

ಊಟ ತಿನ್ನುವ ಮೊದಲು ಅಂದರೆ 20 ನಿಮಿಷಕ್ಕೂ ಮೊದಲು ಒಂದು ಗ್ಲಾಸ್ ನೀರು ಕುಡಿಯಿರಿ.

ಟೀ ಕುಡಿಯಬೇಕೆನಿಸಿದಾಗೆಲ್ಲ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.

ಸೂಚನೆ : ವ್ಯಕ್ತಿಗಳ ಆಹಾರ ವಿಧಾನ ಹಾಗೂ ಮಲಗುವ ಸಮಯ ಬೇರೆ ಬೇರೆಯಾಗಿರುವುದರಿಂದ ಫಲಿತಾಂಶ ಕೂಡ ಭಿನ್ನವಾಗಿರುತ್ತದೆ.

Top