You are here
Home > ಜ್ಯೋತಿಷ್ಯ > ದಿನ ಭವಿಷ್ಯ ಬುಧವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ

ದಿನ ಭವಿಷ್ಯ ಬುಧವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ

ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಆಶೀರ್ವಾದದೊಂದಿಗೆ ಇಂದಿನ ದಿನ ಭವಿಷ್ಯ 13.3.2019

ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಜ್ಯೋತಿಷಂ. ಶ್ರೀ ಸಿದ್ಧಾಂತಿ ಮಂಜುನಾಥ ಭಟ್(ಕುಡ್ಲ)
ದೈವಜ್ಞ ಜ್ಯೋತಿಷ್ಯರು ಹಾಗೂ ಅರ್ಚಕರು ಮಾಂತ್ರಿಕರು.
9611800447
E-mail-gurujimanjunathbhat@gmail.com

ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃ
ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇ
ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು
ಮನಃಶಾಂತಿ, ರಾಜಕೀಯ ವಿಚಾರ,)9611800447

ಮೇಷ

ಮನಸ್ಸಿಗೆ ನೆಮ್ಮದಿ ಕುಟುಂಬದಲ್ಲಿನ ಅಸಮತೋಲನವನ್ನು ತಪ್ಪಿಸಲು ಮನೆಯ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ನಂತರ ನೀವು ತೀರ್ಮಾನ ಕೈಕೊಂಡಲ್ಲಿ ಎಲ್ಲರೂ ನಿಮ್ಮ ತೀರ್ಮಾನವನ್ನು ಒಪ್ಪುವ ಸಾಧ್ಯತೆ ಇರುತ್ತದೆ. ಆದರೆ ಒಬ್ಬರ ವಿಚಾರ ಮತ್ತೊಬ್ಬರ ಬಳಿ ಹೇಳದಿರಿ. ಸದಾ ಕಾಲವು ನಿಮ್ಮನ್ನು ಜನರು ಮಾತನಾಡಿಸಬೇಕು. ಪ್ರತಿಯೊಂದು ಕ್ರಿಯೆಗೂ ಶಹಾಬಾಸ್‌ ಗಿರಿ ಕೊಡಬೇಕೆಂಬ ಮನೋಭೂಮಿಕೆಯಿಂದ ಹೊರಬನ್ನಿ. ಏಕೆಂದರೆ ಎಲ್ಲರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿಸಲು ಶಕ್ಯವಿಲ್ಲ. ನಿಮ್ಮಲ್ಲಿನ ತಪ್ಪನ್ನು ತಿದ್ದುವವರನ್ನು ಗೌರವಿಸಿ.ಸಾಮಾಜಿಕವಾಗಿ ನೀವು ಗುರುತಿಸಲ್ಪಡುವಿರಿ. ನೀವು ಅದ್ಭುತವೂ ವಿಶೇಷವೂ ಆದಂತಹ ಕಾಂತಿಯ ಶಕ್ತಿಯಾಗಿ ಆದರಿಸಲ್ಪಡುವಿರಿ. ಇದು ದೈವವು ನಿಮ್ಮ ಮೇಲೆ ತೋರಿದ ಔದಾರ್ಯವೆಂದು ಭಾವಿಸಿ. ಅಹಂಕಾರ ಪಡದಿರಿ.. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು9611800447

ವೃಷಭ
ಬಹುದಿನದ ನಿರೀಕ್ಷೆ ಕನಸು ಕೈಗೂಡುವುದು. ಎಲ್ಲರಂತೆ ನೀವು ಕೂಡಾ ಸಮಾಜ ಮುಖಿಯಾಗಿ ಉನ್ನತ ಅಧಿಕಾರವನ್ನು ಹೊಂದುವಿರಿ. ಇದರೊಂದಿಗೆ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಒಳಿತಾಗುವುದು.ಸರ್ಕಾರಿ ಕೆಲಸದಲ್ಲಿ ಅನ್ಯರ ಹಸ್ತಕ್ಷೇಪದಿಂದ ತೊಂದರೆ ಎದುರಾಗುವುದು. ಹಾಗಾಗಿ ಯಾರೊಡನೆಯೂ ಗುಟ್ಟು ಬಿಟ್ಟುಕೊಡದಿರಿ. ವಾಹನದಲ್ಲಿ ಸಂಚರಿಸುವಾಗ ದುರ್ಗಾದೇವಿಯ ಸ್ತೋತ್ರವನ್ನು ಪಠಿಸಿ. ಹಣಕಾಸು ಉತ್ತಮವಾಗಿರುವುದು.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು 9611800447

ಮಿಥುನ
ನಿರಾಶೆಯ ಅಲೆಗಳು ನಿಮ್ಮೆದುರು ಹರಿದು ಬರುವ ಮೂಲಕ ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುವ ಸಾಧ್ಯತೆ ಇದೆ. ಆದರೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ವಿಜಯಶಾಲಿಗಳಾಗಿ.ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ಬ್ಯಾಂಕಿನಲ್ಲಿ ವ್ಯವಹರಿಸುವಾಗ ಬ್ಯಾಂಕಿಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿಯಾಗಿಟ್ಟು ಕೊಳ್ಳಿ. ನಿಮ್ಮ ಗಮನವನ್ನು ಬೇರೆಡೆ ಸೆಳೆದು ಹಣ ದೋಚುವವರಿಂದ ಎಚ್ಚರದಿಂದಿರಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು 9611800447

ಕರ್ಕಾಟಕ
ಹಲವು ತಾಪತ್ರಯಗಳ ನಡುವೆಯೂ ಹಮ್ಮಿಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ ಮತ್ತು ಈ ಮೂಲಕ ನಿಮ್ಮನ್ನು ವಿರೋಧಿಸುತ್ತಿದ್ದವರ ಮನದಲ್ಲೂ ಕೂಡಾ ಸಂತಸ ಸಂಭ್ರಮವನ್ನುಂಟು ಮಾಡುವಿರಿ.ಹಳೆಯ ಕಡತಗಳನ್ನು ಸೂಕ್ಷ ಮವಾಗಿಯೇ ಪರಿಶೀಲಿಸಿ ವಿಲೇವಾರಿ ಮಾಡಿ. ಸ್ನೇಹಿತರ ಇಲ್ಲವೆ ಬಂಧುಗಳ ಸಹಕಾರವನ್ನು ಪಡೆಯಿರಿ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲದ ಕಾರಣ ಹಣವನ್ನು ಮಿತವಾಗಿ ಬಳಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು 9611800447

ಸಿಂಹ
ಅನ್ಯಾಯವನ್ನು ಕಂಡು ಸಹಿಸಲಾರದ ನೀವು ನಿಮ್ಮ ಎದುರಾಳಿಯನ್ನು ಎದುರಿಸಲು ಹೆಚ್ಚಿನ ಆತ್ಮಸ್ಥೈರ್ಯದಿಂದ ಹೋರಾಟ ಮಾಡುವಿರಿ ಮತ್ತು ಅದರಲ್ಲಿ ಜಯವನ್ನು ಸಂಪಾದಿಸುವಿರಿ.
ಪ್ರತಿದಿನದಂತೆ ಈ ದಿನವೂ ಎಲ್ಲಾ ಸರಿಯಾಗಿದೆ ಎಂದುಕೊಳ್ಳತ್ತಿರುವಾಗಲೇ ಮನೆಯ ಕೆಲಸಗಾರರು ಇಲ್ಲವೆ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ದಿಢೀರನೆ ರಜಾ ಹಾಕುವುದರಿಂದ ಎಲ್ಲಾ ಕೆಲಸವೂ ಒಟ್ಟಿಗೆ ಮೈಮೇಲೆ ಬಂದಂತೆ ಆಗುವುದು.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು 9611800447

ಕನ್ಯಾ
ಯಾವುದು ಎದುರಿಗಿಲ್ಲವೋ ಅದರ ಬಗ್ಗೆ ಚಿಂತೆ ಮಾಡುವುದು ತರವಲ್ಲ. ಸದ್ಯಕ್ಕೆ ನಿಮ್ಮ ಎದುರಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ. ಇದರಿಂದ ನಿಮಗೆ ಸಮಾಜದಲ್ಲಿ ಗೌರವ ಮನ್ನಣೆ ದೊರೆಯುವುದು.ನಿಮ್ಮ ಕಾರ್ಯಕ್ರಮಗಳ ಸಫಲತೆಗೆ ಅನಿರೀಕ್ಷಿತ ವಲಯದಿಂದ ಭಾರೀ ಸಹಾಯ ದೊರೆಯುವುದು. ಇದರಿಂದ ಮನಸ್ಸಿಗೆ ಆನಂದ ಉಂಟಾಗುವುದು. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಗೌರವ ಆದರಗಳು ದೊರೆಯುವುದು.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು 9611800447

ತುಲಾ
ಸಹನೆ ಮತ್ತು ಸಮಯಾವಧಾನಗಳಿಂದ ಕೆಲ ಸ್ಥಳಗಳಲ್ಲಿ ವಿಶೇಷ ಜನಪ್ರಿಯತೆಯನ್ನು ಗಳಿಸುವಿರಿ. ಹಾಗಾಗಿ ಬರಬೇಕಾಗಿದ್ದ ಹಣವು ಶೀಘ್ರದಲ್ಲಿ ದೊರೆಯುವುದು. ಆಂಜನೇಯ ಸ್ತೋತ್ರವನ್ನು ತಪ್ಪದೆ ಪಠಿಸಿ.ನಿಮ್ಮನ್ನು ಸುಮ್ಮನೆ ಒತ್ತಡದಲ್ಲಿರಿಸುವ ಕಾರ್ಯತಂತ್ರವನ್ನು ರೂಪಿಸುವ ಗೆಳೆಯರಿಂದ ದೂರವಿರಿ. ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಅಧಿಕ ಲಾಭ ಅಥವಾ ನೆಮ್ಮದಿ ಉಂಟಾಗುವುದು. ಗುರುರಾಯರನ್ನು ಸ್ಮರಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು 9611800447

ವೃಶ್ಚಿಕ
ವೃಥಾ ಸುಮ್ಮನೆ ಖರ್ಚಿನ ದಾರಿಗಳನ್ನು ಹುಡುಕಲು ಹೋಗದಿರಿ. ಇದರಿಂದ ನಿಮಗೆ ತೊಂದರೆ ಎದುರಾಗುವುದು. ಒಳ್ಳೆಯ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡಿ. ಆಗ ನಿಮಗೆ ಭಗವಂತನು ದುಪ್ಪಟ್ಟು ಹಣವನ್ನು ಕೊಡುವನು.ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಗಳ ದರ್ಶನಕ್ಕೆ ಜಾತಕಪಕ್ಷಿಯಂತೆ ಕಾಯುವಿರಿ. ಆದರೆ ಗ್ರಹಸ್ಥಿತಿಯು ಕೂಡಾ ನಿರಾಸೆಯನ್ನುಂಟು ಮಾಡುವುದು. ಹಾಗಾಗಿ ಪ್ರಮುಖರ ಭೇಟಿಯು ರದ್ದಾಗಲಿದೆ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು 9611800447

ಧನು
ನೀವು ಹಳೆಯ ಗೆಳೆಯರನ್ನು ಭೇಟಿ ಮಾಡುವಿರಿ. ಅವರ ಮಾತಿನ ಪ್ರಭಾವದಿಂದ ಹಣಕಾಸಿನ ವಿಚಾರದಲ್ಲಿ ಅನುಕೂಲವಾಗುವುದು ಮತ್ತು ಬೇರೊಂದು ಕಡೆ ನೌಕರಿ ದೊರೆಯುವುದು.
ಕಾಡಿನಲ್ಲಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ನಿಮ್ಮ ಪ್ರಯತ್ನಕ್ಕೆ ಭಗವಂತನು ಒಲಿದು ಬರುವನು. ಮನೆ ಬಾಗಿಲಿಗೆ ನಿಮ್ಮ ಕಾರ್ಯಗಳ ಸಫಲತೆಯ ಬಗ್ಗೆ ವಾರ್ತೆ ಬರುವುದು.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು 9611800447

ಮಕರ
ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತೆ ನೀವು ಶ್ರಮಪಟ್ಟು ಮಾಡಿದ ಕೆಲಸದ ಲಾಭಾಂಶವು ಪರರ ಪಾಲಾಗುವುದು. ದುರ್ಗಾದೇವಿಯ ಪ್ರಾರ್ಥನೆ ಮಾಡಿ ಮತ್ತು ಶಿವ ಪಂಚಾಕ್ಷರಿ ಮಂತ್ರ ಪಠಿಸಿ.ಕಟ್ಟಡ ಮೇಲುಸ್ತುವಾರಿಕೆ ಮಾಡುವವರು ಅಥವಾ ಕಟ್ಟಡ ವಿನ್ಯಾಸಕಾರರಿಗೆ ಉತ್ತಮ ದಿನ. ಬಹು ಪ್ರಮುಖವಾದ ಮತ್ತು ಬೃಹತ್ತಾದ ಕಾರ್ಯ ನಿರ್ವಹಿಸಲು ನಿಮಗೆ ಕರೆ ಬರುವ ಸಾಧ್ಯತೆ ಇರುತ್ತದೆ.ಸಮಸ್ಯೆ ನಿಮ್ಮದು ಪರಿಹಾರ ನಮ್ಮದು 9611800447

ಕುಂಭ
ನಿಮ್ಮ ಉತ್ಕರ್ಷವನ್ನು ಕಂಡು ಸಹಿಸಲು ಕಷ್ಟಪಡುತ್ತಿರುವವರು ನಿಮ್ಮ ಮೇಲೆ ವಿನಾಕಾರಣ ಆರೋಪಗಳನ್ನು ಮಾಡುವರು. ಭಗವಂತನ ಅನುಗ್ರಹ ನಿಮ್ಮ ಕಡೆ ಇರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ.ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿರುವ ನಿಮ್ಮನ್ನು ಕಂಡು ಇತರರು ಅಸೂಯೆ ಪಡುವರು. ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು 9611800447

ಮೀನ
ಹಲವು ತಾಪತ್ರಯಗಳ ನಡುವೆಯೂ ಹಿಡಿದ ಕೆಲಸವನ್ನು ಮುಗಿಸುವ ಆತುರತೆ ತೋರುವಿರಿ. ಸ್ನೇಹಿತರು ನಿಜವಾಗಿಯೂ ಈ ಸಂದರ್ಭದಲ್ಲಿ ಸಹಾಯ ಮಾಡುವರು. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು.ಕೇವಲ ಹಗಲುಗನಸು ಕಾಣುವುದನ್ನು ಬಿಡಿ. ನಿಮಗೆ ಮಾಡಲು ಸಾಧ್ಯವಾದುದನ್ನೆ ಆಯ್ಕೆ ಮಾಡಿಕೊಂಡು ಕೆಲಸ ಪೂರೈಸಿ. ಗೆಳೆಯರ ಒತ್ತಾಯದ ಮೇರೆಗೆ ಬಹುಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು 9611800447

Top