You are here
Home > ಜ್ಯೋತಿಷ್ಯ > ವಾರದ ಭವಿಷ್ಯ-ದೇವಿ ಆದಿಶಕ್ತಿಯ ಕೃಪೆಯಿಂದ ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ ನೋಡಿ…

ವಾರದ ಭವಿಷ್ಯ-ದೇವಿ ಆದಿಶಕ್ತಿಯ ಕೃಪೆಯಿಂದ ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ ನೋಡಿ…

ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ

ಚಂದ್ರನ ಚಲನೆ ಆಧಾರದಲ್ಲಿ ಹೇಗೆ ನಿತ್ಯಭವಿಷ್ಯವನ್ನು ಕಂಡುಹಿಡಿಯಬಹುದು. ಅದೇ ರೀತಿ ಇತರ ಗ್ರಹ ಹಾಗೂ ಆಯಾ ವಾರದ ಗ್ರಹ ಬದಲಾವಣೆ ಗಮನಿಸಿ, ಜಾತಕ ರೂಪಿಸಿ ರಾಶಿಬಲ ತಿಳಿಯಬಹುದು. ಆದರೆ ಈ ರೀತಿ ಹೇಳುವ ರಾಶಿಬಲಕ್ಕೆ ಗೋಚಾರ, ದಶಾಭುಕ್ತಿಯ ಫಲ ಅನ್ವಯಿಸುವುದಿಲ್ಲ.
ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ರಾಶಿ ಒಂದೇ ಆಗಿದ್ದರೂ ಕೂಡ ಪ್ರತಿಯೊಬ್ಬರ ಜನ್ಮಜಾತಕದಲ್ಲಿ ದಶಾಭುಕ್ತಿ, ಗ್ರಹಗಳು ಇರುವ ಮನೆಗಳನ್ನು ಆಧರಿಸಿ ರಾಶಿಬಲವನ್ನು ಹೋಲಿಸಿಕೊಳ್ಳಬೇಕು.

ಮೇಷ: ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ.ಉದ್ಯೋಗ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾರದ ಆರಂಭದಿಂದಲೇ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ಕೀರ್ತಿ ಪಡೆಯುತ್ತೀರಿ. ಸ್ಪರ್ಧಾತ್ಮಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ನೀಡಿದ ಸಂದರ್ಶನಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ಪ್ರೀತಿಪಾತ್ರರ ಜತೆಗೆ ಉತ್ತಮ ಬಾಂಧವ್ಯ ಇರುತ್ತದೆ. ಧಾರ್ಮಿಕ ಚಟುವಟಿಕೆಯಿಂದ ನಿಮಗೆ ಅನುಕೂಲವಿದೆ. ವಾರದ ದ್ವಿತೀಯಾರ್ಧದಲ್ಲಿ ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಗೌರವ ದೊರೆಯಲಿದೆ. ಈ ವಾರ ನಿಮ್ಮ ಆರೋಗ್ಯ ಉಲ್ಲಾಸ- ಉತ್ಸಾಹದಿಂದ ಕೂಡಿರುತ್ತದೆ. ಈಗಾಗಲೇ ಇರುವ ಅನಾರೋಗ್ಯ ಸಮಸ್ಯೆ ನಿವಾರಣೆ ಆಗುತ್ತದೆ.

ಸಹೋದ್ಯೋಗಿಗಳ ಜತೆಗೂ ಉತ್ತಮ ಬಾಂಧವ್ಯ ಇರುತ್ತದೆ. ಈಗಾಗಲೇ ಭಿನ್ನಾಭಿಪ್ರಾಯಗಳು ಇದ್ದಲ್ಲಿ ನಿವಾರಣೆ ಆಗುತ್ತವೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವ ಕಡೆಗೆ ಗಮನ ನೀಡುತ್ತೀರಿ. ಸೇವಾ ಕ್ಷೇತ್ರಗಳಲ್ಲಿ ಇರುವವರಿಗೆ ಅಭಿವೃದ್ಧಿ, ಪ್ರಗತಿ ಇದೆ. ವಾರದ ಕೊನೆ ಭಾಗದಲ್ಲಿ ನಿಮ್ಮ ಆಸೆಯಂತೆಯೇ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ವಾರಾಂತ್ಯಕ್ಕೆ ಹಲವು ಅವಕಾಶಗಳ ಬಾಗಿಲು ನಿಮ್ಮ ಪಾಲಿಗೆ ತೆರೆದುಕೊಳ್ಳುತ್ತದೆ. ಆದರೆ ಹತ್ತಿರದ ಸಂಬಂಧದಲ್ಲಿ ಮನಸ್ತಾಪ- ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಎಚ್ಚರವಾಗಿರಿ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ವೃಷಭ: ಮನೆಗಾಗಿ ದುಬಾರಿ ವಸ್ತು ಖರೀದಿ ಸಾಧ್ಯತೆ.ವಿದೇಶ ವ್ಯವಹಾರ ಹಾಗೂ ಹಣಕಾಸು ಹೂಡಿಕೆಗೆ ಸಂಬಂಧಿಸಿದಂತೆ ಈ ಹಿಂದೆ ಹಾಕಿದ ಶ್ರಮಕ್ಕೆ ಈ ವಾರದ ಆರಂಭದಿಂದಲೇ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಕಾನೂನಿಗೆ ಸಂಬಂಧಿಸಿದ ವ್ಯವಹಾರಗಳು ಇದ್ದಲ್ಲಿ ನಿಮ್ಮ ಪರವಾಗಿ ಬಲವಾಗುತ್ತದೆ. ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗುತ್ತದೆ. ಕೈ ಸಾಲ ಪಡೆದಿದ್ದರೆ ಅಥವಾ ಬ್ಯಾಂಕ್ ಗಳಿಂದ ಸಾಲ ಪಡೆದುಕೊಂಡಿದ್ದರೆ ಅವನ್ನು ತೀರಿಸಲು ಸಾಧ್ಯವಾಗುತ್ತದೆ. ಆರೋಗ್ಯವು ಸಾಮಾನ್ಯವಾಗಿರುತ್ತದೆ. ವಾರದ ಮೊದಲ ಭಾಗದಲ್ಲಿ ಫಾಸ್ಟ್ ಫುಡ್ ಸೇವನೆ ಮಾಡಬೇಡಿ. ವಾರದ ಮಧ್ಯ ಭಾಗದಲ್ಲಿ ನಿಮ್ಮ ಪಾಲಿನ ಅದೃಷ್ಟ ಚೆನ್ನಾಗಿರಲಿದೆ. ಕುಟುಂಬದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.

ವಾರದ ಮಧ್ಯ ಭಾಗದಿಂದ ರಾಜಕೀಯ ಜೀವನದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ವಾರಾಂತ್ಯಕ್ಕೆ ನಿಮ್ಮ ವೈಯಕ್ತಿಕ ಅಭಿವೃದ್ಧಿಯೂ ಚೆನ್ನಾಗಿ ಆಗಲಿದೆ. ಯಾವುದಾದರೂ ಒಂದು ಬಗೆಯಲ್ಲಿ ಗೌರವ-ಪುರಸ್ಕಾರ ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಮನೆಗೆ ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಉದ್ಯೋಗ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ನಿಮಗಿಂತ ಮೇಲಿನ ಸ್ತರದಲ್ಲಿ ಇರುವವರು ನಿಮ್ಮ ಮಾತಿಗೆ ಗೌರವ ಹಾಗೂ ಬೆಲೆ ನೀಡಲಿದ್ದಾರೆ. ಇದರಿಂದಾಗಿ ನಿಮಗೆ ಸಾರ್ಥಕ್ಯದ ಭಾವ ಮೂಡಿಸುತ್ತದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಮಿಥುನ: ಉದ್ಯೋಗ-ವ್ಯಾಪಾರಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ ಯೋಗ.ವಾರದ ಆರಂಭದಿಂದಲೇ ಹಲವು ಬಗೆಯಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲಿದ್ದೀರಿ. ನಿಮ್ಮ ಆರೋಗ್ಯವಾಗಿ ಉತ್ತಮವಾಗಿದ್ದು, ಉಲ್ಲಾಸ- ಉತ್ಸಾಹದಿಂದ ಇರುತ್ತೀರಿ. ನಿಮ್ಮ ಬುದ್ಧಿ-ದೇಹಗಳು ಸಕಾರಾತ್ಮಕ ಅಭಿವೃದ್ಧಿಯನ್ನು ಗುರುತಿಸುತ್ತವೆ. ಈ ಹಿಂದೆ ಇದ್ದು, ಈ ವರೆಗೆ ಕಾಡುತ್ತಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಲ್ಲಿ ಯಶಸ್ವಿ ಆಗುತ್ತೀರಿ. ಸಂಗಾತಿ ಹಾಗೂ ಮಕ್ಕಳ ಜತೆಗೆ ಉತ್ತಮ ಬಾಂಧವ್ಯ ಇರುತ್ತದೆ. ಉದ್ಯೋಗ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿರಂತರ ಹಾಗೂ ಅದ್ಭುತವಾದ ಪ್ರಗತಿಯನ್ನು ಸಾಧಿಸುತ್ತೀರಿ. ಆದರೆ ವಾರದ ಮಧ್ಯ ಭಾಗದಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆರೋಗ್ಯವು ಮಧ್ಯಮವಾಗಿರುತ್ತದೆ.

ಉದ್ಯೋಗ ಅಥವಾ ವ್ಯಾಪಾರ-ವ್ಯವಹಾರಗಳಿಗೆ ಸಂಬಂಧಿಸಿದಂತೆ ದೂರಪ್ರಯಾಣ ಮಾಡಬೇಕಾಗುತ್ತದೆ. ಇದೇ ವೇಳೆ ಹಣಕಾಸಿನ ವೆಚ್ಚ ಕೂಡ ಹೆಚ್ಚಾಗಲಿದೆ. ತುಂಬ ಮುಖ್ಯವಾದ ಸಂಗತಿಗಳ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ವೈಯಕ್ತಿಕ ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳಲು ಹೆಚ್ಚು ಸಮಯವನ್ನು ವಿನಿಯೋಗಿಸಬೇಕು. ವಾರದ ಅಂತ್ಯಕ್ಕೆ ಒಳ್ಳೆ ಅದೃಷ್ಟವಿದೆ. ಉದ್ಯೋಗದ ಸಲುವಾಗಿ ನೀಡಿದ್ದ ಸಂದರ್ಶನಗಳಲ್ಲಿ ಯಶಸ್ಸು ದೊರೆಯಲಿದೆ. ವಾರದ ಕೊನೆ ಭಾಗಕ್ಕೆ ಶುಭ ಸುದ್ದಿ ಕೇಳುತ್ತೀರಿ. ವೈಯಕ್ತಿಕ ಸಂಬಂಧ ಹತ್ತಿರ ಆಗುತ್ತದೆ. ಆದರೆ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಕಷ್ಟಗಳು ಎದುರಾಗಲಿದೆ. ಮುಖ್ಯ ವಿಚಾರಗಳ ಬಗ್ಗೆ ನಿರ್ಲಕ್ಷ್ಯ ಬೇಡ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಕರ್ಕಾಟಕ: ಉದ್ಯೋಗ- ವ್ಯಾಪಾರ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ.ಹಣ ಹೂಡಿಕೆ ಹಾಗೂ ವಿದೇಶ ವ್ಯವಹಾರದಲ್ಲಿ ವಾರದ ಮೊದಲ ಭಾಗ ಅದ್ಭುತವಾದ ಫಲಿತಾಂಶ ನೀಡುತ್ತದೆ. ಕೋರ್ಟ್-ಕಚೇರಿ ವ್ಯವಹಾರಗಳು ನಿಮ್ಮ ಪರವಾಗಿ ಆಗುವತ್ತ ಸಾಗುತ್ತವೆ. ನಿಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ ಫಲಿತಾಂಶ ದೊರೆಯಲು ಆರಂಭ ಆಗುತ್ತದೆ. ಆದರೆ ಆರೋಗ್ಯ ವಿಷಯದಲ್ಲಿ ಸಮಸ್ಯೆಗಳಾಗಬಹುದು. ನೋವಿನ ಅನುಭವ ಆಗುತ್ತದೆ. ಹಣಕಾಸಿನ ವ್ಯವಹಾರಗಳು ಹಾಗೂ ವೈಯಕ್ತಿಕ ಸಂಬಂಧದ ವಿಚಾರದಲ್ಲಿ ಹೆಚ್ಚು ಶ್ರಮ ಹಾಕಬೇಕು. ವಾರದ ದ್ವಿತೀಯಾರ್ಧದಲ್ಲಿ ಆರೋಗ್ಯ ಸುಧಾರಿಸುತ್ತದೆ. ಉಲ್ಲಾಸ ಮೂಡುತ್ತದೆ. ನಿರಂತರ ವ್ಯಾಯಾಮದಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಉತ್ತಮವಾದ ಪ್ರಗತಿ ಕಾಣಿಸಿಕೊಳ್ಳಲಿದೆ.

ಮನಸು ಬಹಳ ಉತ್ಸಾಹದಿಂದ ಕೂಡಿರುತ್ತದೆ. ಸಹೋದ್ಯೋಗಿಗಳ ಜತೆಗೆ ನಿರಂತರವಾಗಿ ಆಸಕ್ತಿಕರ ವಿಚಾರಗಳ ಚರ್ಚೆ ನಡೆಯಲಿದೆ. ವಾರದ ಕೊನೆ ಭಾಗಕ್ಕೆ ಸರಿದಂತೆ ಆರೋಗ್ಯದ ವಿಚಾರಕ್ಕೆ ಖರ್ಚುಗಳು ಆಗಬಹುದು. ವೈಯಕ್ತಿಕ ಸಂಗತಿಗಳು, ವ್ಯಾಪಾರ-ವ್ಯವಹಾರ ಕಷ್ಟಕರವಾಗಿ ಗೋಚರಿಸುತ್ತದೆ. ಬಹಳ ಇಷ್ಟಪಡುವ, ನಿಮಗೆ ಆಪ್ತವಾದ ವ್ಯಕ್ತಿ ಜತೆಗೆ ಮನಸ್ತಾಪ, ಜಗಳ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಮಾತಿನ ಸಲುವಾಗಿ ಮನಸ್ತಾಪ- ಜಗಳ ಆಗಬಹುದು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಸಿಂಹ: ವಿದೇಶದ ಉದ್ಯೋಗಕ್ಕೆ ಯತ್ನಿಸುತ್ತಿದ್ದರೆ ಹೆಚ್ಚಿನ ಶ್ರಮ ಹಾಕಿ ಕಲೆ, ಸಾಹಿತ್ಯ, ಸಂಗೀತ, ವೈದ್ಯಕೀಯ, ಸೌಂದರ್ಯ, ನಟನೆ, ಶೈಕ್ಷಣಿಕ ರಂಗ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವಂಥವರಿಗೆ ವಾರದ ಮೊದಲ ಭಾಗ ಅದ್ಭುತವಾದ ಪ್ರಗತಿ ಇದೆ. ನಿಮ್ಮ ಬೌದ್ಧಿಕ ಕೌಶಲ ಹೆಚ್ಚಲಿದೆ. ಕ್ರೀಡೆ, ಸ್ಪರ್ಧಾತ್ಮಕ ರಂಗದಲ್ಲಿ ಉತ್ತಮವಾದ ಅಭಿವೃದ್ಧಿ ಕಾಣಲಿದ್ದೀರಿ. ನಿಮ್ಮ ಆರ್ಥಿಕ ಸ್ಥಿತಿ ಉನ್ನತ ಮಟ್ಟಕ್ಕೆ ಏರಲಿದೆ. ಮಕ್ಕಳ ಪ್ರಗತಿಗಾಗಿ ನೀವು ಹಾಕುವ ಶ್ರಮಕ್ಕೆ ಉತ್ತಮವಾದ ಫಲಿತಾಂಶ ದೊರೆಯಲಿದೆ. ಶಿಕ್ಷಣ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರಗಳಿಗೆ ನಿಮ್ಮ ಸಮಯ-ಬುದ್ಧಿ ಮೀಸಲಿಡಬೇಕಾಗುತ್ತದೆ. ಉದ್ಯೋಗ ಅಥವಾ ವ್ಯಾಪಾರದ ವಿಸ್ತರಣೆ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ವಾರದ ಆರಂಭದಲ್ಲಿ ಸ್ಪರ್ದಿಗಳು ಅಥವಾ ಶತ್ರುಗಳ ವಿರುದ್ಧ ಸೆಣೆಸಲು ನಿಮ್ಮ ಸಾಮರ್ಥ್ಯ ವೃದ್ಧಿ ಆಗಲಿದೆ. ಆದರೆ ಆರೋಗ್ಯ ವಿಚಾರದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಎದುರಾಗಬಹುದು. ವಾರದ ಕೊನೆ ಭಾಗದಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಹಾಗೂ ಸಂಭ್ರಮ ಇರುತ್ತದೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತೀರಿ. ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಇನ್ನೂ ಹೆಚ್ಚಿನ ಶ್ರಮ ಹಾಕಿ. ಹಾಗೆ ಹೆಚ್ಚು ಶ್ರಮ ಹಾಕಿ ಪ್ರಯತ್ನ ಮಾಡುವುದರಿಂದ ಅಂದುಕೊಂಡ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಕನ್ಯಾ: ಮನೆಗೆ ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ.ಒಳ್ಳೆ ಅದೃಷ್ಟ ಹಾಗೂ ಹಲವಾರು ಸಕಾರಾತ್ಮಕ ಫಲಿತಾಂಶಗಳು ನಿಮ್ಮ ಪಾಲಿಗೆ ವಾರದ ಆರಂಭದಿಂದಲೇ ಇವೆ. ಅದು ಕೂಡ ಹಲವು ಮಾರ್ಗಗಳ ಮೂಲಕ ಒಳ್ಳೆ ಫಲಿತಾಂಶಗಳನ್ನು ಕಾಣುತ್ತೀರಿ. ಆರೋಗ್ಯ ಕೂಡ ಉತ್ತಮವಾಗಿದ್ದು, ಸಕಾರಾತ್ಮಕ ಸಾಮರ್ಥ್ಯ ಹಾಗೂ ಉತ್ಸಾಹದಿಂದ ಇರುತ್ತೀರಿ. ಈಗ ಯಾವುದಾದರೂ ದೈಹಿಕ ಬಾಧೆಗಳಿಂದ ಬಳಲುತ್ತಿದ್ದರೆ ನಿವಾರಣೆ ಆಗುವ ಸಮಯ ಇದು. ಮಾನಸಿಕ ಹಾಗೂ ದೈಹಿಕವಾಗಿಯೂ ನೆಮ್ಮದಿ ದೊರೆತಂತಾಗುತ್ತದೆ. ಉದ್ಯೋಗ ಅಥವಾ ವ್ಯಾಪಾರದ ಸಲುವಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ಸೇವಾ ಕ್ಷೇತ್ರದಲ್ಲಿ ಇರುವವರು, ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಇರುವವರು ಹಾಕಿದ ಶ್ರಮಕ್ಕೆ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ಸಂದರ್ಶನಗಳಲ್ಲಿ ಭಾಗವಹಿಸಿದರೆ ಯಶಸ್ಸು ನಿಮ್ಮದಾಗುತ್ತದೆ.

ಸಹೋದ್ಯೋಗಿಗಳ ಜತೆಗೆ ಸಂವಹನ ಪರಿಣಾಮಕಾರಿಯಾಗಿ ಇರುತ್ತದೆ. ಮನೆಗೆ ಅಗತ್ಯ ಇರುವ ಅಥವಾ ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ನಿಮ್ಮ ಪ್ರೀತಿಪಾತ್ರರ ಜತೆಗೆ ವಾರದ ಮಧ್ಯ ಭಾಗದಲ್ಲಿ ಬಹಳ ಮುಖ್ಯವಾದ ಮಾತುಕತೆಯನ್ನು ನಡೆಸುತ್ತೀರಿ. ಈ ಅವಧಿಯಲ್ಲಿ ನೀಡಿದ ಸಂದರ್ಶನ ಯಶಸ್ವಿಯಾಗುತ್ತದೆ. ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಗೆಲುವಿದೆ. ಆದಾಯದ ಮೂಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹಾಕುವ ನಿಮ್ಮ ಶ್ರಮ ಯಶಸ್ವಿ ಆಗುತ್ತದೆ. ವಾರದ ಮಧ್ಯ ಭಾಗದಲ್ಲಿ ಬೌದ್ಧಿಕ ಸಾಮರ್ಥ್ಯ ಹೆಚ್ಚಿರುತ್ತದೆ. ಯಾವುದಾದರೂ ಮೂಲದಿಂದ ಹಣಕಾಸು ಅನುಕೂಲ ಒದಗಿಬರುತ್ತದೆ. ಉದ್ಯೋಗ ಅಥವಾ ವ್ಯಾಪಾರ ಸಲುವಾಗಿ ದೂರ ಪ್ರಯಾಣ ಮಾಡಬಹುದು. ಅದರಿಂದ ಅನುಕೂಲವೂ ಇದೆ. ವಾರದ ಕೊನೆಗೆ ಪ್ರೀತಿ-ಪ್ರೇಮ, ಆರೋಗ್ಯ ವಿಚಾರದಲ್ಲಿ ಸಣ್ಣ-ಪುಟ್ಟ ಸಮಸ್ಯೆ ಆಗಬಹುದು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ತುಲಾ: ಉದ್ಯೋಗ-ವ್ಯಾಪಾರ ಕ್ಷೇತ್ರದಲ್ಲಿ ಅದ್ಭುತವಾದ ಪ್ರಗತಿ.ವಾರದ ಶುರುವಿನಿಂದಲೇ ಕುಟುಂಬ ಸದಸ್ಯರ ಜತೆಗಿನ ಬಾಂಧವ್ಯ ಗಟ್ಟಿಯಾಗುತ್ತಾ ಸಾಗಲಿದೆ. ಖಾಸಗಿ ಅಥವಾ ಸರಕಾರಿ ಕ್ಷೇತ್ರಗಳಲ್ಲಿ ನೀಡಿದ ಸಂದರ್ಶನಗಳು ಯಶಸ್ವಿ ಆಗಲಿವೆ. ಯಾವುದಾದರೂ ಒಂದು ಮೂಲದಿಂದ ಹಣಕಾಸು ಅನುಕೂಲ ಒದಗಿಬರಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆ ಇದೆ. ವಾರದ ಮಧ್ಯಭಾಗದಲ್ಲಿ ವೈವಾಹಿಕ ಜೀವನದಲ್ಲಿ ಸುಮಧುರವಾದ ಕ್ಷಣಗಳನ್ನು ಕಳೆಯಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನೀವು ಹಾಕಿದ್ದ ಶ್ರಮಕ್ಕೆ ವಾರದ ಮಧ್ಯ ಭಾಗದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಅದ್ಭುತವಾದ ಪ್ರಗತಿ ಸಿಗಲಿದೆ. ನಿಮ್ಮ ನಡವಳಿಕೆ ಹಾಗೂ ಕೆಲಸದ ಕಾರಣಕ್ಕೆ ಪೋಷಕರು ಸಂತುಷ್ಟರಾಗುತ್ತಾರೆ.

ನಿಮ್ಮ ಮನೆಯ ನವೀಕರಣಕ್ಕಾಗಿ ಮನಸು ಮಾಡುವ ಸಾಧ್ಯತೆ ಇದೆ. ಮನೆಗಾಗಿ ಅಗತ್ಯ ಇರುವ ಅಥವಾ ವಿಲಾಸಿ ವಸ್ತುಗಳನ್ನು ಖರೀದಿಸಬೇಕು ಎಂದುಕೊಂಡಿದ್ದರೆ ಆ ಉದ್ದೇಶ ಈಡೇರುತ್ತದೆ. ವಾರದ ಕೊನೆಯ ಭಾಗದಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡು, ಉಲ್ಲಾಸ- ಉತ್ಸಾಹ ಮೂಡುತ್ತದೆ. ಶೈಕ್ಷಣಿಕವಾಗಿಯೂ ಉತ್ತಮವಾದ ಪ್ರಗತಿ ಇದೆ. ಕಲೆ, ಸಿನಿಮಾ, ಸಂಗೀತ, ನಟನಾ ರಂಗದಲ್ಲಿ ಪ್ರಯತ್ನ ಮಾಡುತ್ತಿರುವ ಹೊಸಬರಿಗೆ ಉತ್ತಮವಾದ ಪ್ರಗತಿ, ಏಳ್ಗೆ ಇದೆ. ಒಟ್ಟಾರೆಯಾಗಿ ಈ ವಾರ ಸಕಾರಾತ್ಮಕ ಫಲಿತಾಂಶಗಳೇ ಹೆಚ್ಚಿವೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ವೃಶ್ಚಿಕ: ರಾಜಕೀಯ- ಸಾಮಾಜಿಕ ಜೀವನದಲ್ಲಿ ಅದೃಷ್ಟದ ದಿನಗಳು.ವಾರದ ಆರಂಭದಿಂದಲೇ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತಮವಾದ ಪ್ರಗತಿ ಇದೆ. ಕೋರ್ಟ್ ನಲ್ಲಿ ವ್ಯಾಜ್ಯಗಳಿದ್ದಲ್ಲಿ ಈ ಹಿಂದಿಗಿಂತ ಈಗ ನಿಮ್ಮ ಪರವಾಗಿ ವಾದ ಬಲವಾಗಲಿದೆ. ವಾರದ ಮಧ್ಯಭಾಗದಲ್ಲಿ ವೈವಾಹಿಕ ಜೀವನದಲ್ಲಿ ಹೆಚ್ಚು ಸಂತೋಷ ಹಾಗೂ ಸಂಭ್ರಮ ಇರಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೀರಿ. ಉದ್ಯೋಗ ಸ್ಥಳದಲ್ಲಿ ನೀವು ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ತಾತ್ಕಾಲಿಕವಾಗಿ ಯಾವುದಾದರೂ ಸೇವೆ ಒದಗಿಸುತ್ತಿದ್ದಲ್ಲಿ ಅದನ್ನು ಪೂರ್ಣಾವಧಿಗೆ ಒದಗಿಸಲು ಅವಕಾಶ ದೊರೆಯಲಿದೆ. ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಒಳ್ಳೆ ಅದೃಷ್ಟ ನಿಮ್ಮ ಪಾಲಿಗಿದೆ. ಕುಟುಂಬ ಸದಸ್ಯರ ಜತೆಗಿನ ನಿಮ್ಮ ಸಂವಹನ ಈ ವಾರ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ.

ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಸಕಾರಾತ್ಮಕವಾದ ಬದಲಾವಣೆ ನಿರೀಕ್ಷೆ ಮಾಡಬಹುದು. ನಿಮ್ಮ ವೃತ್ತಿಪರ ಕೌಶಲಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಲಿದೆ. ಯಾವುದಾದರೂ ಒಂದು ಕಡೆಯಿಂದ ಹಣಕಾಸಿನ ಅನುಕೂಲ ಆಗುತ್ತದೆ. ಉದ್ಯೋಗ ಅಥವಾ ವ್ಯಾಪಾರಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ ಮಾಡಬೇಕಾಗುತ್ತದೆ. ಆದರೆ ವಾರಾಂತ್ಯಕ್ಕೆ ಸರಿದಂತೆ ಹಣಕಾಸಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಒಟ್ಟಾರೆಯಾಗಿ ನೋಡಿದಾಗ ಈ ವಾರ ಸಕಾರಾತ್ಮಕವಾದ ಫಲಿತಾಂಶಗಳು ಹೆಚ್ಚು ದೊರೆಯಲಿವೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಧನುಸ್ಸು: ಧಾರ್ಮಿಕ ಕಾರ್ಯ ಆಯೋಜಿಸುವ ಸಾಧ್ಯತೆ.ವಾರದ ಆರಂಭದಿಂದಲೇ ಹಲವು ಬಗೆಯಲ್ಲಿ ಸಕಾರಾತ್ಮಕ ಫಲಿತಾಂಶ ಹಾಗೂ ಒಳ್ಳೆ ಅದೃಷ್ಟ ನಿಮ್ಮ ಪಾಲಿಗಿದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಸಕಾರಾತ್ಮಕವಾದ ಉಲ್ಲಾಸ ಹಾಗೂ ಉತ್ಸಾಹ ಇರುತ್ತದೆ. ಈಗಾಗಲೇ ಯಾವುದಾದರೂ ದೈಹಿಕ ಬಾಧೆಯಿಂದ ಬಳಲುತ್ತಿದ್ದಲ್ಲಿ ಅದರಿಂದ ನಿವಾರಣೆ ದೊರೆಯುತ್ತದೆ. ಕೌಟುಂಬಿಕ ಜೀವನದಲ್ಲಿ ಶಾಂತಿ-ನೆಮ್ಮದಿ ಪಡೆಯಬೇಕು ಎಂದು ಶ್ರಮ ಹಾಕುತ್ತಿರುವವರು ಅದರಲ್ಲಿ ಯಶಸ್ಸು ಪಡೆಯಬಹುದು. ನಿಮ್ಮ ಕುಟುಂಬ ಸದಸ್ಯರ ಸಹಕಾರದೊಂದಿಗೆ ಮನೆಯಲ್ಲಿ ಧಾರ್ಮಿಕ ಕಾರ್ಯ ಆಯೋಜನೆ ಮಾಡುವ ಸಾಧ್ಯತೆ ಇದೆ. ವೈವಾಹಿಕ ಸಂಬಂಧದ ಮೂಲಕ ಹಣಕಾಸಿನ ಅನುಕೂಲ ಆಗುವ ಸಾಧ್ಯತೆಗಳಿವೆ. ನಿಮ್ಮ ಸಂಗಾತಿ ಸಲುವಾಗಿ ಖರೀದಿ ಮಾಡುವ ಸಾಧ್ಯತೆಗಳಿವೆ.

ಉದ್ಯೋಗ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ವಾರದ ಆರಂಭದಿಂದಲೇ ಉತ್ತಮವಾದ ಪ್ರಗತಿ ಇದೆ. ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ನೀಡಿದ್ದ ಸಂದರ್ಶನಗಳಲ್ಲಿ ಯಶಸ್ಸು ನಿಮ್ಮ ಪಾಲಿಗೆ ದೊರೆಯಲಿದೆ. ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮ ಪಾಲಿಗೆ ಜಯ ಇದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳಿದ್ದಲ್ಲಿ ಅವುಗಳನ್ನು ನಿವಾರಿಸಿಕೊಳ್ಳುತ್ತೀರಿ. ವಾರದ ಕೊನೆ ಭಾಗದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಉತ್ತಮವಾದ ಅದೃಷ್ಟ ನಿಮ್ಮ ಪಾಲಿಗಿದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಮಕರ: ಉದ್ಯೋಗ-ವ್ಯಾಪಾರದಲ್ಲಿ ಅದ್ಭುತವಾದ ಪ್ರಗತಿ.ವಿದೇಶಿ ವ್ಯವಹಾರಗಳಲ್ಲಿ ವಾರದ ಆರಂಭದಿಂದಲೇ ಅದ್ಭುತವಾದ ಪ್ರಗತಿ ಇದೆ. ನೀವು ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹಣಕಾಸು ಹೂಡಿಕೆ ಹಾಗೂ ಆರ್ಥಿಕ ವ್ಯವಹಾರಗಳಲ್ಲಿ ನಿಮಗೆ ಅದೃಷ್ಟವಿದೆ. ಶತ್ರುಗಳು ಹಾಗೂ ಸ್ಪರ್ಧಿಗಳನ್ನು ಮಣಿಸುವ ವಿಚಾರದಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಕೋರ್ಟ್ ವ್ಯಾಜ್ಯಗಳಲ್ಲಿ ನಿಮ್ಮ ಪರ ವಾದ ಬಲವಾಗಲಿದೆ. ಆದರೆ ಆರೋಗ್ಯ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಾಗಬಹುದು. ಪ್ರೀತಿ-ಪ್ರೇಮ ವ್ಯವಹಾರಗಳಲ್ಲಿ ತೊಂದರೆಗಳು ಎದುರಾಗಬಹುದು. ವಾರದ ದ್ವಿತೀಯಾರ್ಧದಲ್ಲಿ ಆರೋಗ್ಯ ಸುಧಾರಣೆ ಕಾಣಲಿದೆ. ಯಾವುದಾದರೂ ದೈಹಿಕ ನೋವುಗಳಿದ್ದಲ್ಲಿ ನಿವಾರಣೆ ಆಗಲಿದೆ. ವಾರದ ಮಧ್ಯಭಾಗದಲ್ಲಿ ಸಂಗಾತಿ ಜತೆಗೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ.

ಒಂದು ವೇಳೆ ನೀವು ಅವಿವಾಹಿತರಾಗಿದ್ದಲ್ಲಿ ಅಥವಾ ಇನ್ನೂ ಪ್ರೀತಿ-ಪ್ರೇಮದಲ್ಲಿ ಬಿದ್ದಿಲ್ಲ ಅಂತಾದರೆ ಈ ವಾರ ನಿಮಗೆ ಸಂಗಾತಿ ದೊರೆಯುವ ಸಾಧ್ಯತೆ ಇದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಅದ್ಭುತವಾದ ಪ್ರಗತಿ ಕಾಣುತ್ತೀರಿ. ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ವಾರದ ಕೊನೆ ಭಾಗದಲ್ಲಿ ನಿಮಗೆ ಅನುಕೂಲವಿದೆ. ತಂದೆ ಕಡೆಯ ಸಂಬಂಧಿಕರ ಜತೆಗೆ ಉತ್ತಮ ಸಂವಹನ ಇರುತ್ತದೆ. ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಅಂದುಕೊಂಡ ಸ್ಥಾನ ಮಾನ ಪಡೆಯಲಿದ್ದೀರಿ. ಒಟ್ಟಾರೆಯಾಗಿ ಈ ವಾರ ನಿಮ್ಮ ಪಾಲಿಗೆ ಮಿಶ್ರ ಫಲವಿದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಕುಂಭ: ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವ ಯೋಗ.ಹಣಕಾಸಿನ ವಿಚಾರದಲ್ಲಿ ವಾರದ ಆರಂಭದಿಂದಲೇ ನಿರೀಕ್ಷಿತ ಫಲಿತಾಂಶವನ್ನು ಪಡೆಯಲಿದ್ದೀರಿ. ವಿವಿಧ ಆದಾಯ ಮೂಲದಿಂದ ಆರ್ಥಿಕವಾಗಿ ಅನುಕೂಲ ಪಡೆಯಲಿದ್ದೀರಿ. ಜೀವನಶೈಲಿ ಹಾಗೂ ಜೀವನ ಮಟ್ಟ ಎರಡೂ ಉನ್ನತವಾಗಿರುತ್ತವೆ. ಬೌದ್ಧಿಕವಾಗಿಯೂ ನಿಮ್ಮ ಸಾಮರ್ಥ್ಯ ಎತ್ತರಕ್ಕಿರುತ್ತದೆ. ಸ್ಪರ್ಧಾತ್ಮಕ ಕ್ಷೇತ್ರ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ನೀವು ಹಾಕಿದ ಶ್ರಮಕ್ಕೆ ನಿರೀಕ್ಷಿತವಾದ ಫಲಿತಾಂಶ ಪಡೆಯಲಿದ್ದೀರಿ. ಯಾವುದಾದರೂ ಮೂಲದಿಂದ ಹಣಕಾಸಿನ ಅನುಕೂಲ ಒದಗಿ ಬರಲಿದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವ ಯೋಗವಿದೆ. ವಾರದ ಮಧ್ಯಭಾಗದಲ್ಲಿ ಶಿಕ್ಷಣ, ವ್ಯಾಪಾರ ಅಥವಾ ಸೇವೆ ಇಂಥ ಯಾವ ಕಾರಣಕ್ಕಾದರೂ ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ.

ಹೆಚ್ಚುವರಿಯಾಗಿ ಖರ್ಚುಗಳು ಆಗಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ವಾರ ಮಧ್ಯಮವಾಗಿರುತ್ತದೆ. ಪ್ರತಿಸ್ಪರ್ಧಿಗಳು, ಶತ್ರುಗಳನ್ನು ಮಣಿಸುವ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದೆ. ಹಣ ಹೂಡಿಕೆ ಹಾಗೂ ವಿದೇಶ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅದ್ಭುತವಾದ ಪ್ರಗತಿ ಇದೆ. ವಾರದ ಕೊನೆ ಭಾಗಕ್ಕೆ ಉತ್ತಮ ಅದೃಷ್ಟ, ಹಲವು ಸಕಾರಾತ್ಮಕ ಫಲಿತಾಂಶ ಇದೆ. ನಿಮ್ಮ ದೈಹಿಕ ಸಾಮರ್ಥ್ಯ ಹೆಚ್ಚಾಗಲಿದೆ. ಆರೋಗ್ಯ ಕೂಡ ಸುಧಾರಿಸುತ್ತದೆ. ಸಕಾರಾತ್ಮಕ ಶಕ್ತಿ ಹಾಗೂ ಉತ್ಸಾಹ ನಿಮ್ಮಲ್ಲಿ ಕಾಣಿಸಿಕೊಳ್ಳಲಿದೆ. ಈ ವರೆಗೆ ನೀವು ಅನುಭವಿಸುತ್ತಿದ್ದ ನೋವು ನಿವಾರಣೆ ಆಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷವಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಅದ್ಭುತವಾದ ಪ್ರಗತಿ ಇದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಮೀನ: ಉದ್ಯೋಗ ಸಂದರ್ಶನಗಳಲ್ಲಿ ಯಶಸ್ಸಿದೆ.ವಾರದ ಮೊದಲ ಭಾಗದಿಂದಲೇ ಹಲವು ಬಗೆಯಲ್ಲಿ ಭರವಸೆದಾಯಕ ಫಲಿತಾಂಶವನ್ನು ಪಡೆಯಲಿದ್ದೀರಿ. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಉದ್ಯೋಗಕ್ಕಾಗಿ ತೆರಳಿದ್ದ ಸಂದರ್ಶನಗಳಲ್ಲಿ ಯಶಸ್ಸು ದೊರೆಯಲಿದೆ. ಆರ್ಥಿಕವಾಗಿಯೂ ಯಶಸ್ಸು ನಿಮ್ಮ ಪಾಲಿಗೆ ಸಿಗಲಿದೆ. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಕೂಡ ನಿರಂತರವಾಗಿ ಬೆಳವಣಿಗೆ- ಪ್ರಗತಿಯನ್ನು ದಾಖಲಿಸುತ್ತೀರಿ. ತಾತ್ಕಾಲಿಕವಾದ ಸೇವೆ ಒದಗಿಸುತ್ತಿದ್ದಲ್ಲಿ ಅದನ್ನು ಪರ್ಮನೆಂಟ್ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಆರೋಗ್ಯ ಸ್ಥಿತಿಯು ಉತ್ತಮವಾಗಿರುತ್ತದೆ. ಏನಾದರೂ ಸಮಸ್ಯೆಗಳು ಇದ್ದಲ್ಲಿ ಅದು ಕೂಡ ನಿವಾರಣೆ ಆಗುತ್ತದೆ. ನಿಮ್ಮ ನಡವಳಿಕೆಯಿಂದ ಪೋಷಕರು ಸಂತುಷ್ಟರಾಗುತ್ತಾರೆ.
ವಾರದ ಮಧ್ಯಭಾಗದಲ್ಲಿ ಆರ್ಥಿಕವಾಗಿ ಹೆಚ್ಚು ಸದೃಢರಾಗುತ್ತೀರಿ. ಯಾವುದಾದರೂ ಒಂದು ಮೂಲದಿಂದ ಹಣಕಾಸಿನ ಅನುಕೂಲ ಒದಗಿಬರುತ್ತದೆ. ವೈವಾಹಿಕ ಜೀವನದಲ್ಲಿ ಉತ್ತಮ ಕ್ಷಣಗಳನ್ನು ಅನುಭವಿಸುತ್ತೀರಿ. ವಾರದ ಮಧ್ಯ ಭಾಗದಲ್ಲಿ ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ವಾರದ ಕೊನೆ ಭಾಗದಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲೂ ಆರೋಗ್ಯದ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಬೇಕು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಶ್ರೀ ಕ್ಷೇತ್ರ ಧರ್ಮಸ್ಥಳ ಪುಣ್ಯ ಕ್ಷೇತ್ರಗಳಿಂದ ವಿಶೇಷ ಪೂಜೆ ನಡೆಯುತ್ತದೆ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121 ಶ್ರೀ ವಿಶ್ವರೂಪ ಆಚಾರ್ಯರು

Top