You are here
Home > ರಾಜಕೀಯ > ನಟಿ ರಮ್ಯಾ ಮೇಲೆ 10 ಸಾವಿರ ಕೋಟಿ ಕೇಸ್..!ಏಕೆ ಗೊತ್ತಾ..?

ನಟಿ ರಮ್ಯಾ ಮೇಲೆ 10 ಸಾವಿರ ಕೋಟಿ ಕೇಸ್..!ಏಕೆ ಗೊತ್ತಾ..?

ಕನ್ನಡ ಚಿತ್ರ ನಟಿ ಮತ್ತು ರಾಜಕಾರಣಿ ಆಗಿರುವ ರಮ್ಯಾ ತಾವು ಟ್ವಿಟ್ಟರ್ ನಲ್ಲಿ ಮಾಡುವ ಕೆಲವು ಟ್ವೀಟ್ ಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ.
ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಆಗಿರುವ ನಟಿ ರಮ್ಯಾ, ತಮ್ಮನ್ನು ಹೋಲುವ ಮೇಣದ ಪ್ರತಿಮೆಯೊಂದರ ಹಣೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ‘ಚೋರ್‌’ ಎಂದು ಬಣ್ಣ ಬಳಿಯುತ್ತಿರುವ ಫೋಟೋ ಸೃಷ್ಟಿಸಿ ಅದನ್ನು ಟ್ವೀಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

ಆದರೆ ಇದರಿಂದ ರಮ್ಯಾಗೆ ಸಂಕಷ್ಟ ಎದುರಾಗಿದ್ದು ಈ ಟ್ವೀಟ್‌ ಅನ್ನು ಅವರು ಅಳಿಸದೇ ಹೋದಲ್ಲಿ ಆಕೆಯ ವಿರುದ್ಧ 10 ಸಾವಿರ ಕೋಟಿ ರು. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ದೆಹಲಿ ಮೂಲದ ವಕೀಲರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಈ ಟ್ವೀಟ್‌ ಅನ್ನು ಮಂಗಳವಾರ ರಾತ್ರಿಯೊಳಗೆ ತೆಗೆದು ಕ್ಷಮೆ ಕೇಳದೇ ಇದ್ದಲ್ಲಿ ರಮ್ಯಾ ವಿರುದ್ಧ ಬರೋಬ್ಬರಿ 10 ಸಾವಿರ ಕೋಟಿ ರು. ಮಾನನಷ್ಟಮೊಕದ್ದಮೆ ಹೂಡಲಾಗುವುದು ವಕೀಲರೊಬ್ಬರು ಎಚ್ಚರಿಸಿದ್ದಾರೆ.ಜೊತೆಗೆ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್‌ ಗಾಂಧಿ ಅವರನ್ನೂ ಪ್ರತಿವಾದಿ ಮಾಡಲಾಗುವುದು ಎಂದು ದೆಹಲಿ ಮೂಲದ ವಕೀಲ ವಿಭೋರ್‌ ಆನಂದ್‌ ಎಂಬುವವರು ಎಚ್ಚರಿಕೆ ನೀಡಿದ್ದಾರೆ.

Top