You are here
Home > ರಾಜಕೀಯ > ನೂರು ಕೋಟಿ ಮಾನನಷ್ಟ ಕೇಸ್ ಹಾಕಿದ ಸಿದ್ದರಾಮಯ್ಯ.!

ನೂರು ಕೋಟಿ ಮಾನನಷ್ಟ ಕೇಸ್ ಹಾಕಿದ ಸಿದ್ದರಾಮಯ್ಯ.!

ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಹತ್ತಿರವಾದಂತೆ ಎಲ್ಲಾ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿಯೇ ಸಾಗಿದೆ.ಈ ಪ್ರಚಾರದ ಸಮಯದಲ್ಲಿ ರಾಜಕೀಯ ಪಕ್ಷಗಳು ಮುಖಂಡರುಗಳು ಒಬ್ಬರ ಮೇಲೆ ಒಬ್ಬರು ಕೆಸರೆಡಚಾಡುವುದು ಸಾಮಾನ್ಯವಾಗಿ ಹೋಗಿದೆ.

ಕೇಂದ್ರದ ರಾಷ್ಟ್ರೀಯ ಪಕ್ಷದ ನಾಯಕರುಗಳನ್ತೂ ಕರ್ನಾಟಕದಲ್ಲಿ ಟಿಕಾಣಿ ಹುದುಬಿಟ್ಟಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ನೂರು ಕೋಟಿ ಮೊತ್ತದ ಮಾನನಷ್ಟ ಮೊಕದ್ದೊಮ್ಮೆ ಹೂಡಲು ಹೊರಟಿದ್ದಾರೆ.

ಟೆನ್ ಪರ್ಸೆಂಟ್ ಸರ್ಕಾರ..!

ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವನ್ನು ಟೆನ್ ಪರ್ಸೆಂಟ್ ಸರ್ಕಾರ ಎಂದು ಕರೆದಿದ್ದಾರೆಂದು ಆರೋಪಿಸುತ್ತಿರುವ ಮುಖ್ಯಮಂತ್ರಿಗಳು, ನನ್ನ ವಿರುದ್ದ ಏನೂ ದಾಖಲೆಗಲಿಲ್ಲದೆ ನೀವು ಹೇಗೆ ನಮ್ಮನ್ನು ಟೆನ್ ಪರ್ಸೆಂಟ್ ಸರ್ಕಾರ ಎಂದು ಹಿಗೆಲೆಯುತ್ತಿದ್ದೀರಿ. ಇದರಿಂದ ನನ್ನ ವರ್ಚಸ್ಸಿಗೆ ಮತ್ತು ನಮ್ಮ ಸರ್ಕಾರಕ್ಕೆ ಧಕ್ಕೆಯಾಗಿದೆ.

ನಾನು ಟೆನ್ ಪರ್ಸೆಂಟ್ ತೆಗೆದುಕೊಂಡಿರುವುದಕ್ಕೆ ನಿಮ್ಮಲ್ಲಿ ದಾಖಲೆಗಳು ಇವೆಯೇ,ಅಂತಹ ದಾಖಲೆಗಲೆನಾದ್ರೂ ಇದ್ರೆ ಸಾಬೀತು ಪಡಿಸಿ. ಇಲ್ಲವೇ ನನ್ನಲ್ಲಿ ಕ್ಷಮೆ ಕೇಳಿ.ಎಂದು ಕೆಂಡ ಮೋದಿಯವರ ಮೇಲೆ ಕೆಂಡ ಕಾಡಿದ್ದಾರೆ.

ಇಷ್ಟಕ್ಕೂ ನಿಲ್ಲದ ಸಿದ್ದರಾಮಯ್ಯನವರು, ನೀವು ಕ್ಷಮೆ ಕೇಳದಿದ್ದರೆ ನೂರು ಕೋಟಿಯ ಮಾನನಷ್ಟ ಮೊಕದ್ದೊಮ್ಮೆ ಹಾಕುವುದಾಗಿ ಹೇಳಿದ್ದಾರೆ.

Top