You are here
Home > ರಾಜಕೀಯ > ಪ್ರಕಾಶ್ ರೈ ವಿರುದ್ದ ಸಿಡಿದೆದ್ದ ಹುಚ್ಚ ವೆಂಕಟ್.!!!

ಪ್ರಕಾಶ್ ರೈ ವಿರುದ್ದ ಸಿಡಿದೆದ್ದ ಹುಚ್ಚ ವೆಂಕಟ್.!!!

ಈಗಾಗಲೇ  ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹುಚ್ಚ ವೆಂಕಟ್ ಸ್ಪರ್ದಿಸಿದ್ದು, ನಾನು ಯಾವುದೇ ರೀತಿಯ ಹಣ ಆಗಲಿ, ಇತರ ಯಾವುದೇ ವಸ್ತುಗಳನ್ನು ಕೊಡುವುದಿಲ್ಲ. ಮನೆ ಮನೆಗೆ ಬಂದು ವೋಟ್ ಹಾಕಿ ಅಂತ ಭಿಕ್ಷೆ ಕೂಡ ಕೇಳೋದಿಲ್ಲ.ನೀವೇ ಬಂದು ವೋಟ್ ಹಾಕಿ ನನ್ನನ್ನು ಗೆಲ್ಲಿಸಿ ಎಂದು ಹೇಳಿದ್ದಾರೆ.

ಈಗ ಹುಚ್ಚ ವೆಂಕಟ್ ನಟ ಪ್ರಕಾಶ್ ರೈ ವಿರುದ್ದ ಸಿಡಿದೆದ್ದಿದ್ದಾರೆ.ಯಾಕಪ್ಪಾ ಅಂತೀರಾ..ನಿಮಗೆಲ್ಲ ಗೊತ್ತಿರುವ ಹಾಗೆ, ಪ್ರಕಾಶ್ ರಾಜ್ ಪ್ರಧಾನಿ ನರೇಂದ್ರ ಮೋದಿಯ ಪ್ರತಿಯೊಂದು ನಡೆಯನ್ನು ಟೀಕಿಸುತ್ತಿರುವುದು ಗೊತ್ತೇ ಇದೆ. ಇದಕ್ಕಾಗಿಯೇ ಈಗ ಹುಚ್ಚ ವೆಂಕಟ್ ಪ್ರಕಾಶ್ ರಾಜ್ ವಿರುದ್ದ ಹುರಿದುಬಿದ್ದಿದ್ದಾರೆ.

ಹುಚ್ಚವೆಂಕಟ್ ಹೇಳಿದ್ದೇನು ಗೊತ್ತಾ..?

ಈ ಪ್ರಕಾಶ್ ರೈಗೆ ಮಾಡೋದಕ್ಕೆ ಬೇರೆ ಕೆಲಸ ಇಲ್ಲ.ಹಾಗಾಗಿ ಮೋದಿ ವಿರುದ್ದ ಕೆಲಸಕ್ಕೆ ಬಾರದ ಹೇಳಿಕೆಗಳನ್ನು ನೀಡುತ್ತಾರೆ ಎಂದು ಟೀಕಿಸಿದ್ದಾರೆ.ಸಿನಿಮಾದಲ್ಲಿ ವಿಲನ್ ಆಗಿದ್ದಿಯಾ, ನಿಜ ಜೀವನದಲ್ಲಿ ಆಗ್ಬೇಡ ಎಂದು ಏಕ ವಚನದಲ್ಲಿ ಮಾತನಾಡಿದ್ದಾರೆ.

ಹುಚ್ಚ ವೆಂಕಟ್ ಗರಂ ಆದ ಈ ವಿಡಿಯೋ ನೋಡಿ…

ರಾಜ್ಯದಲ್ಲಿ ಪ್ರಕಾಶ್ ರಾಜ್ ಹೊಡಿತಿರೋ ಡೈಲಾಗ್ ವರ್ಕೌಟ್ ಆಗ್ತಿಲ್ಲ. ಹಾಗಾಗಿ ಪ್ರಧಾನಿ ಮೋದಿ ವಿರುದ್ದ ಕೆಲಸಕ್ಕೆ ಬಾರದ ಹೇಳಿಕೆಗಳನ್ನು ರೈ ಮಾತನಾಡುತ್ತಾರೆಂದು ಹುಚ್ಚ ವೆಂಕಟ್ ಗರಂ ಆಗಿದ್ದಾರೆ.

ಮೋದಿಗೆ ಯುವಕ ಪಾಲೋವರ್ಸ್ ತುಂಬಾ ಇದ್ದಾರೆ. ಕಲ್ಲು ತಗೊಂಡು ಹೊಡಿತಾರೆ. ಹಾಗಾಗಿ ಹೆಲ್ಮೆಟ್ ಹಾಕ್ಕೊಂಡು ಓಡಾಡು ಎಂದು ಹೇಳಿದ್ದಾರೆ.ದೊಡ್ಡವರನ್ನು ಟೀಕಿಸಿದರೆ ನೀನು ಫೇಮಸ್ ಹಾಗೊಕ್ಕೆ ಆಗಲ್ಲ.ಎಂದೆಲ್ಲಾ ಪ್ರಕಾಶ್ ರೈ ಮೇಲೆ ಹುಚ್ಚ ವೆಂಕಟ್ ಗುಡುಗಿದ್ದಾರೆ.

Top