You are here
Home > ವ್ಯಕ್ತಿ ವಿಶೇಷಣ > ಚಾರ್ಲಿ ಚಾಪ್ಲಿನ್’ಹಾಸ್ಯ ಲೋಕದ ಈ ಸಾಮ್ರಾಟ ಆರಂಭಿಕ ಸಿನಿಮಾ ಸಂಬಳ ಎಷ್ಟು ಗೊತ್ತಾ..?ತಿಳಿಯಲು ಈ ಲೇಖನ ಓದಿ..

ಚಾರ್ಲಿ ಚಾಪ್ಲಿನ್’ಹಾಸ್ಯ ಲೋಕದ ಈ ಸಾಮ್ರಾಟ ಆರಂಭಿಕ ಸಿನಿಮಾ ಸಂಬಳ ಎಷ್ಟು ಗೊತ್ತಾ..?ತಿಳಿಯಲು ಈ ಲೇಖನ ಓದಿ..

ಚಾರ್ಲಿ ಚಾಪ್ಲಿನ್ ಹೆಸರು ಕೇಳದವರಿಲ್ಲ. ಹಾಸ್ಯ ಲೋಕದ ಈ ಸಾಮ್ರಾಟ 1913ರಂದು ಡಿಸೆಂಬರ್ 16ರಂದು ವಾರಕ್ಕೆ 150 ಡಾಲರ್‍ಗಳಿಗೆ ಸಿನಿಮಾ ವೃತ್ತಿ ಆರಂಭಿಸಿದರು. ಈ ಜಗದ್ವಿಖ್ಯಾತ ಕಾಮಿಡಿ ಸೂಪರ್‍ಸ್ಟಾರ್ ಬಗ್ಗೆ ಚುಟುಕು ಸುದ್ದಿ. ಇಂಗ್ಲಿಷ್ ಹಾಸ್ಯ ನಟ, ಸಿನಿಮಾ ನಿರ್ಮಾಪಕ ಮತ್ತು ಸಂಯೋಜಕ ಸರ್ ಚಾರ್ಲೆಸ್ ಸ್ಪೆನ್ಸರ್ ಚಾರ್ಲಿ ಚ್ಲಾಪಿನ್ ಜನಿಸಿದ್ದು 16ನೇ ಏಪ್ರಿಲ್ 1889ರಲ್ಲಿ.

ಚಾರ್ಲಿ ಚಾಪ್ಲಿನ್ ಎಂದೇ ಲೋಕವಿಖ್ಯಾತರಾಗಿದ್ದ ಇವರು ಮೂಕಿ ಚಿತ್ರಗಳ ಕಾಲದಲ್ಲೇ ದೊಡ್ಡ ಹೆಸರು ಮಾಡಿದ್ದರು. ದಿ ಟ್ರಾಂಪ್ ಮೂಲಕ ಜಗತ್ಪ್ರಸಿದ್ದರಾಗಿದ್ದ ಚಾಪ್ಲಿನ್, ಸಿನಿಮಾ ರಂಗದ ಬಹು ಮುಖ್ಯ ತಾರೆಯಲ್ಲಿ ಅಗ್ರಮಾನ್ಯರಾಗಿದ್ದಾರೆ.

ಇಂಗ್ಲೆಂಡ್‍ನಲ್ಲಿ ಮಹಾರಾಣಿ ವಿಕ್ಡೋರಿಯಾ ಕಾಲ ದಿಂದ 1977ರಲ್ಲಿ ನಿಧನರಾಗುವ ತನಕ 75 ವರ್ಷಗಳ ಸುದೀರ್ಘ ಬದುಕಿನಲ್ಲಿ ಚಾಪ್ಲಿನ್ ತಮ್ಮ ಬಹುಪಾಲು ಸಮಯವನ್ನು ಸಿನಿಮಾದಲ್ಲೇ ಕಳೆದ ಪ್ರತಿಭಾವಂತ ನಟ.

ಚಾಪ್ಲಿನ್‍ನಲ್ಲಿದ್ದ ಅಗಾಧ ಪ್ರತಿಭೆ ಗುರುತಿಸಿದ ಅಮೆರಿಕ ನ್ಯೂಯಾರ್ಕ್ ಮೋಷನ್ ಪಿಕ್ಚರ್ ಕಂಪನಿ ಸೇರುವಂತೆ ಆಹ್ವಾನ ನೀಡಿತು. ಕೀಸ್ಟೋನ್ ಸ್ಟುಡಿಯೋದಲ್ಲಿ ಆ ಕಾಲದಲ್ಲೇ ಸೂಪರ್ ಸ್ಟಾರ್ ನಟನಾಗಿದ್ದ ಫ್ರೆಡ್ ಮೇಸ್ ಸ್ಥಾನವನ್ನು ತುಂಬಲು ಚಾಪ್ಲಿನ್‍ಗೆ ಆಹ್ವಾನ ನೀಡಲಾಗಿತ್ತು.

ಡಿಸೆಂಬರ್ 16, 1913ರಂದು ವಾರಕ್ಕೆ 150 ಡಾಲರ್‍ಗಳ ಸಂಭಾವನೆಗಾಗಿ ಸಿನಿಮಾಗಳಲ್ಲಿ ನಟಿಸಲು ಚಾಪ್ಲಿನ್ ನಿರ್ಧರಿಸಿದರು. ಆಗಿನ 150 ಡಾಲರ್‍ಗಳು ಈಗ 3,597 ಡಾಲರ್‍ಗಳಿಗೆ ಸಮ(ಸುಮಾರು 2.34 ಲಕ್ಷ ರೂ.ಗಳು). ಯುವಕ ಚಾಪ್ಲಿನ್‍ನ ಪ್ರತಿಭೆ ನೋಡಿ ಮಾಲೀಕ ಮ್ಯಾಕ್ ಸೆನ್ನೆಟ್ ಬೆರಗಾದರು.

ಮೇಕಿಂಗ್ ಎ ಲೀವಿಂಗ್, ಚಾಪ್ಲಿನ್ ಅಭಿನಯದ ಮೊಟ್ಟಮೊದಲ ಸಿನಿಮಾ. 2ನೇ ಫೆಬ್ರವರಿ 1914ರಲ್ಲಿ ತೆರೆಕಂಡ ಈ ಸಿನಿಮಾ ಚಾಪ್ಲಿನ್ ಬದುಕಿಗೆ ಹೊಸ ತಿರುವು ನೀಡಿದ್ದು ಇತಿಹಾಸ. ಅಲ್ಲಿಂದ ಹಿಂದಿರುಗಿ ನೋಡದ ಈ ವಾಮನಮೂರ್ತಿ ಪ್ರಪಂಚವೇ ನಿಬ್ಬೆರಗಾಗುವಂತೆ ಎತ್ತರಕ್ಕೆ ಬೆಳೆದರು.

Top