You are here
Home > ಸಿನಿಮಾ > ಅನ್ಯಾಯದ ಮೇಲೆ ಅನ್ಯಾಯ ಹಾಗುತ್ತಿದೆ ನಟ ವಿನೋದ್ ರಾಜ್ ರವರಿಗೆ..!ತಿಳಿಯಲು ಈ ಲೇಖನ ಓದಿ…

ಅನ್ಯಾಯದ ಮೇಲೆ ಅನ್ಯಾಯ ಹಾಗುತ್ತಿದೆ ನಟ ವಿನೋದ್ ರಾಜ್ ರವರಿಗೆ..!ತಿಳಿಯಲು ಈ ಲೇಖನ ಓದಿ…

ಕಾರಿನ ಟೈರ್ ಪಂಕ್ಚರ್ ಆಗಿರುವುದಾಗಿ ಹೇಳಿ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರ ಕಾರಿನಲ್ಲಿದ್ದ ಒಂದು ಲಕ್ಷ ರೂಪಾಯಿಗಳನ್ನು ಕಳ್ಳ ದೋಚಿದ್ದಾನೆ.

ನೆಲಮಂಗಲ ಪಟ್ಟಣದ ಇಂಡಸ್ ಇಂಡ್ ಬ್ಯಾಂಕ್ ಮುಂಭಾಗದಲ್ಲಿ ನಟ ಮತ್ತು ಈಗ ಕೃಷಿಕನಾಗಿರುವ ವಿನೋದ್ ರಾಜ್ ರವರ ಗಮನ ಬೇರೆಡೆಗೆ ಸೆಳೆದು ಅವರ 1 ಲಕ್ಷ ಹಣವನ್ನು ದೋಚಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಟನಾಗಿದ್ದ ವಿನೋದ್ ರಾಜ್, ಈಗ ವ್ಯವಸಾಯವನ್ನು ಮಾಡಿಕೊಂಡಿದ್ದಾರೆ. ತಮ್ಮ ತೋಟದಲ್ಲಿ ಕೆಲಸ ಮಾಡುವ ಕೆಲಸದವರಿಗೆ ಸಂಬಳ ಕೊಡುವ ಸಲುವಾಗಿ ಬ್ಯಾಂಕಿಗೆ ಬಂದು ಹಣ ಡ್ರಾ ಮಾಡಿದ್ದರು.

ಅವರು ತಮ್ಮ ಕಾರಿನಲ್ಲಿ ಕುಳಿತಿದ್ದ ವೇಳೆ ಬಂದ ವ್ಯಕ್ತಿಯೋರ್ವ, ಸಾರ್ ನಿಮ್ಮ ಕಾರಿನ ಟೈರ್ ಪಂಕ್ಚರ್ ಆಗಿದೆ ಎಂದು ಹೇಳಿದ್ದಾನೆ. ನಿಜವಿರಬಹುದೆಂದು ಭಾವಿಸಿ ವಿನೋದ್ ರಾಜ್ ಕಾರಿನಿಂದ ಕೆಳಗಿಳಿದ ವೇಳೆ ಹಣವಿದ್ದ ಬ್ಯಾಗ್ ಎಗರಿಸಿಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಈಗ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Top