You are here
Home > ಸಿನಿಮಾ > ಕಾರು ಅಪಘಾತಕ್ಕೆ ಸಂಬಂದಿಸಿದಂತೆ ಸ್ನೇಹಿತನ ವಿರುದ್ದವೇ ದೂರು ಕೊಡಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್..!

ಕಾರು ಅಪಘಾತಕ್ಕೆ ಸಂಬಂದಿಸಿದಂತೆ ಸ್ನೇಹಿತನ ವಿರುದ್ದವೇ ದೂರು ಕೊಡಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕಾರು ಅಪಘಾತಕ್ಕಿಡಾಗಿದ್ದು ತಮ್ಮ ಬಲಗೈ ಮುರಿದಿದ್ದು ಈಗ ಆಸ್ಪತ್ರೆಯಲ್ಲಿದ್ದಾರೆ.ಆದರೆ ತಮ್ಮ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇಫ್ ಆಗಿದ್ದು, ತನ್ನ ಸ್ನೇಹಿತನ ವಿರುದ್ಧವೇ ದೂರು ದಾಖಲಿಸಿದ್ದಾರೆ.

ಪ್ರಕರಣದಲ್ಲಿ ರಾಯ್ ಆಂತೋನಿ ಮಾತ್ರ ಏಕೈಕ ಆರೋಪಿಯಾಗಿದ್ದು, ಸ್ನೇಹಿತನ ವಿರುದ್ಧವೇ ದರ್ಶನ್ ಖಾಸಗಿ ಗನ್‍ಮ್ಯಾನ್ ಮತ್ತು ಡ್ರೈವರ್ ಆಗಿರುವ ಲಕ್ಷ್ಮಣ್ ಮೂಲಕ ದೂರು ಕೊಡಿಸಿದ್ದು ಎಫ್‍ಐಆರ್ ದಾಖಲಾಗಿದೆ.

ನಟ ದರ್ಶನ್ ಸೇರಿದಂತೆ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರನ್ನು ಕೂರಿಸಿಕೊಂಡು ಚಾಲಕ ರಾಯ್ ಆಂಟೋನಿ ಸುಮಾರು ಬೆಳಗ್ಗಿನ ಜಾವ 2.30 ಗಂಟೆಯಲ್ಲಿ ರಿಂಗ್ ರಸ್ತೆ ಜಂಕ್ಷನ್ ತಿರುವಿನಲ್ಲಿ ಕಾರನ್ನು ನಿರ್ಲಕ್ಷ್ಯತೆ ಚಾಲನೆ ಮಾಡಿಕೊಂಡು ಬರುತ್ತಿದ್ದರು ಎಂಬ ದೂರನ್ನು ದಾಖಲಿಸಲಾಗಿದೆ.

ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಇದರಿಂದ ದರ್ಶನ್ ಅವರ ಬಲಗೈ ಮೂಳೆ ಮುರಿದಿದೆ. ಅಲ್ಲದೇ ದೇವರಾಜ್ ಅವರ ಎದೆಯ ಭಾಗ ಹಾಗೂ ಎಡಗೈ ಬೆರಳಿಗೆ ಪೆಟ್ಟಾಗಿದ್ದು, ಪ್ರಜ್ವಲ್ ಅವರಿಗೆ ಸಣ್ಣಪುಟ್ಟ ಪೆಟ್ಟಾಗಿದೆ.

Top