You are here
Home > ಸಿನಿಮಾ > ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ..!ನಟ ದರ್ಶನ್ ಜೊತೆಗೆ ಇದ್ದ ಮತ್ತಿಬ್ಬ ನಟರು ಯಾರು ಗೊತ್ತಾ..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ..!ನಟ ದರ್ಶನ್ ಜೊತೆಗೆ ಇದ್ದ ಮತ್ತಿಬ್ಬ ನಟರು ಯಾರು ಗೊತ್ತಾ..?

ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಅಭಿಮಾನಿಗಳು ಬಾಸ್ ಎಂದೇ ಕರೆಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ ನಸುಕಿನ ಜಾವ ಮೈಸೂರು ಬಳಿ ಅಪಘಾತಕ್ಕೀಡಾಗಿದೆ.

ಈ ಅಪಘಾತದಲ್ಲಿ ಅವರ ಕೈ ಮುರಿದಿದೆ ಎಂಬ ಮಾಹಿತಿ ಇದೆ.. ಅವರ ಜೊತೆ ಕನ್ನಡದ ಹಿರಿಯ ನಟರಾದ ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ಮತ್ತೊಬ್ಬರು ಸಹ ಪ್ರಯಾಣಿಸುತ್ತಿದ್ದು  ಬೆಳಗಿನ ಜಾವ ಸುಮಾರು ಮೂರು ಗಂಟೆಯ ಸಮಯದಲ್ಲಿ ಅಪಘಾತ ನಡೆಡಿದೆ ಎಂದು ಹೇಳಲಾಗಿದೆ.

ಅಪಘಾತದಿಂದಾಗಿ ಬಲಗೈ ಮೂಳೆ ಮುರಿದುಕೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಅಂತ ಆಸ್ಪತ್ರೆಯವರು ಹೇಳಿದ್ದಾರೆ.ಸೋಮವಾರ ಬೆಳಗ್ಗೆ ರಸ್ತೆ ಅಪಘಾತದಲ್ಲಿ ನಟ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ರಾಯ್ ಆಂಥೋನಿ ಎಂಬವರು ಗಾಯಗೊಂಡು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಘಟನೆ ಬೆಳಿಗ್ಗೆ ಸುಮಾರು ಮೂರು ಗಂಟೆಯ ಸಮಯದಲ್ಲಿ ಅಪಘಾತ ನಡೆದಿದ್ದು, ಮೈಸೂರಿನ ಹೊರ ವಲಯದ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದೆ. ಮೂವರಿಗೂ ಗಾಯವಾಗಿದೆ ಎಂದು ಹೇಳಲಾಗಿದೆ.ದರ್ಶನ್​ ಅವರು ಒಡೆಯ ಚಿತ್ರದ ಶೂಟಿಂಗ್​ ಮುಗಿಸಿ ವಾಪಸ್​ ಬರುತ್ತಿದ್ದಾಗ ಘಟನೆ ನಡೆದಿದೆ ಎಂದು ತಿಳಿದು ಹೇಳಲಾಗಿದೆ

ಭಾನುವಾರ ದರ್ಶನ್, ದೇವರಾಜ್ ಹಾಗು ಪ್ರಜ್ವಲ್ ದೇವರಾಜ್ ಅವರು ಮೃಸೂರಿನ ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದರು. ಅಷ್ಟೇ ಅಲ್ಲದೇ ಪ್ರಾಣಿಗಳನ್ನು ದತ್ತು ಪಡೆದುಕೊಂಡು ಅರಮೆನೆಯ ಸುತ್ತ ಓಡಾಡಿ, ಮಾವಾಡಿಗಳಿಗೆ ಊಟ ಮಾಡಿಸಿ, ಯದುವೀರ್ ಅವರೊಡನೆ ಮಾತನಾಡಿ ಇಂದು ಬೆಳಗಿನ ಜಾವ ಹೊರಟ್ಟಿದ್ದರು. ಒಂದೇ ಕಾರಿನಲ್ಲಿ ದರ್ಶನ್, ನಟರಾದ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಪ್ರಯಾಣಿಸುತ್ತಿದ್ದರು. ಈ ವೇಳೆ ಮೈಸೂರಿನ ಹೊರವಲಯದ ಹಿನಕಲ್ ಬಳಿ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

Top